ನೀರಿದೆ, ಬೇರಿದೇ , ಗೊಬ್ಬರವಿದೆ
ಆದರೆ ಜೊತೆಗೆ ದೊಡ್ಡ ಕೊಂಬೆಯ ನೆರಳಿದೆ
ಅದಕೆ ನಾ ಬೆಳೆಯಲಾರೆ
ಆದರೆ ಜೊತೆಗೆ ದೊಡ್ಡ ಕೊಂಬೆಯ ನೆರಳಿದೆ
ಅದಕೆ ನಾ ಬೆಳೆಯಲಾರೆ
ಅವನಿದ್ದಾನೆ, ಇವನಿದ್ದಾನೆ ,ಎಲ್ಲರಿದ್ದಾರೆ
ಆದರೆ ಜೊತೆಗೆ ನನ್ನ ಅಹಂ ಇದೆ
ಅದಕೆ ನಾ ಬೆರೆಯಲಾರೆ
ದುಃಖ ಇದೆ , ಕಾಗದ ಇದೆ , ಪೆನ್ನೂ ಇದೆ
ಆದರೆ ಜೊತೆಗೆ ಸುಖವೂ ಇದೆ
ಅದಕೆ ನಾ ಬರೆಯಲಾರೆ
ರಾಗವಿದೆ ತಾಳವಿದೆ ರಸಿಕರಿದ್ದಾರೆ
ಆದರೆ ಜೊತೆಗೆ ನೆಂಟರ ಮಾತಿದೆ
ಅದಕೆ ನಾ ಹಾಡಲಾರೆ
ಕಾಲಿದೆ ಕೈ ಇದೆ ತಲೆಯೂ ಇದೆ
ಆದರೆ ಜೊತೆಗಾರರ ಕಣ್ಣೂ ಇದೆ
ಅದಕೆ ನಾ ಹೆಚ್ಚು ದುಡಿಯಾಲಾರೆ
No comments:
Post a Comment