ಒಮ್ಮೆ ನೋಡಿದ ಸಿನೆಮಾಕ್ಕೆ ಇನ್ನೊಮ್ಮೆ ಹೋಗುವುದೇ ಅಪರೂಪ, ಅದರಲ್ಲೂ ನಾಟಕ ಎರಡು ಬಾರಿ ನೋಡುವುದು ಸ್ವಲ್ಪ ಕಷ್ಟವೇ ( when we have OTT tempting to enjoy something at home)... ಆದರೆ ನನಗೆ ಎರಡನೇ ಬಾರಿ ನೋಡಬೇಕು ಅನಿಸಿದ್ದು just passion from Meghana Belawadi and Avinash Tegginamath. ಮೇಘನಾ ಅವರು ಲಾಲ್ಬಾಗ್ ನಲ್ಲಿ ನಾಟಕದ promotion ge pamplet ಹಂಚುತ್ತಾ ಇದ್ದರು, ಅವಿನಾಶ್ ಮಗ ಅವೀಶ ಕೂಡ.
ಇನ್ನೊಂದು,
ಚೌಡಯ್ಯ ಸ್ಮಾರಕ ಭವನದಲ್ಲಿ ನೋಡಿದ
ನಾಟಕ್ಕಿಂತ ಬೇರೆ ಪಾತ್ರ ವರ್ಗದಲ್ಲಿ
ಹೇಗೆ ಬರಬಹುದು ಎಂಬ ಕುತೂಹಲ.
ಕುಂತಿ, ಕೃಷ್ಣ, ದ್ರೌಪದಿ, ಕರ್ಣ
ದುರ್ಯೋಧನ ಬದಲಾಗಿಲ್ಲ ಎಂಬ ಸಮಾಧಾನ. ದ್ರೋಣ,
ವ್ಯಾಸ, ಭೀಷ್ಮ , ಭೀಮ ಪಾತ್ರಧಾರಿಗಳು
ಬದಲಾದರೂ ನಾಟಕದ ಪ್ರದರ್ಶನದಲ್ಲಿ ಏನೂ
ಕೊರತೆ ಅನಿಸಲಿಲ್ಲ.
ದ್ರೋಣ , ವ್ಯಾಸ ಪಾತ್ರಗಳ ಅಭಿನಯ
ಚೌಡಯ್ಯಕ್ಕಿಂತ ತುಂಬಾ ಪಕ್ವ ವಾಗಿತ್ತು
ಎಂದೆನಿಸಿತು.
ಸಂಗೀತ ಇಬ್ಬರ ಬದಲು ಮೂವರು
ಬಂದಿದ್ದು, ಒಳ್ಳೆಯದೇ ಆಯಿತು.
ಮನುಷ್ಯರನ್ನು
ದೇವತಾ ಪುರುಷರನ್ನಾಗಿ ನೋಡಿದ ನಮಗೆ ದೇವತಾ
ಪುರುಷರನ್ನು ಮನುಷ್ಯರನ್ನಾಗಿ ನೋಡಲು ಈ ನಾಟಕ
ಸಹಕರಿಸುತ್ತದೆ. ಎರಡನೇ ಪ್ರಯೋಗದಲ್ಲಿ, ವ್ಯಾಸ
ಮತ್ತು ದ್ರೋಣ ಪಾತ್ರದಾರಿಗಳು ಇದನ್ನ
ತುಂಬಾ ಚೆನ್ನಾಗಿ ವ್ಯಕ್ತ ಗೊಳಿಸಿದರು.
ಪ್ರಕಾಶ ಬೆಳವಾಡಿ
~~~~~~~~~
ಪರ್ವ ನಾಟಕದ ಪ್ರಯೋಗವನ್ನ ಯಾವುದೇ
sponsors ಇಲ್ಲದೆ 20 ಕ್ಕೂ ಹೆಚ್ಚುಬಾರಿ ರಂಗಕ್ಕೆ ತಂದಿದ್ದಾರೆ ಅಂದರೆ,
ಅದು ಅವರ ನಿರ್ದೇಶನಕ್ಕೆ,
ಹೆಸರಿಗೆ, ಅವರ ಓದಿನ ಆಳಕ್ಕೆ
ಸಾಕ್ಷಿ.
ನನ್ನಂತೆ ಎರಡು ಮೂರು ಬಾರಿ
ನೋಡಿದವರು, ನನ್ನಂತೆ 10 ಸ್ನೇಹಿತರನ್ನ ಎಳೆತಂದವರು ಬಹಳ ಜನ.
ಸ್ನೇಹಿತರಿಗೆ ಇಷ್ಟವಾಗಬಹುದು ಅನ್ನೋ ಧೈರ್ಯ ನಮಗೆ
ಬರುವುದೇ ಪ್ರಕಾಶರ ನಿರ್ದೇಶನದಿಂದಾಗಿ.
ರಂಗ ಸಜ್ಜಿಕೆ, ಸಂಗೀತ , ಮೈಕ್,
ಬೆಳಕು ಪ್ರತೀ ಪ್ರಯೋಗದಲ್ಲೂ ಅದೇ
ಶಿಸ್ತು.
Sarcasm rooted in knowledge, without crossing moral
boundaries, is rare to find. It's indeed a delicate balance between wit and
respect. Never seems someone waking on that delicate line as elegantly as
Prakash Belawadi. Seen the same in Sankranti, were Bijjala was played by Mr
Prakash Belawadi and in Swayamvara were ಸಂಪ್ರದಾಯವಾದಿ
ಬ್ರಾಹ್ಮಣ was taking in the
same tone, which was probably ahead of it's time.
ಪರ್ವ, ಬರೇ ನಾಟಕದ ಕಾಲಾವಧಿಯ
ದೃಷ್ಟಿಯಿಂದ ಶ್ರೇಷ್ಠವೆನಿಸುವುದಿಲ್ಲ, ಅದರ ನಿರೂಪಣೆಯ ಆಳ,
ಪರಾಮರ್ಶೆಯ ಅಗಲ, ಪ್ರದರ್ಶನ ವೃತ್ತಿಪರತೆಯ
ಎತ್ತರದಿಂದ, ಇತರೇ ಹವ್ಯಾಸಿ ನಾಟಕಗಳಿಗಿಂತ
ವಿಭಿನ್ನ ಎನಿಸಿಕೊಳ್ಳುತ್ತದೆ.Production
quality ಯಾವುದೇ ಹವ್ಯಾಸಿ ರಂಗಭೂಮಿಯ ಮಿತಿಯನ್ನು
ದಾಟಿಯೇ ಬಿಟ್ಟಿದೆ . ಉಡುಪು ವಿನ್ಯಾಸ ಯಾವುದೇ
theater reportary ಗಳಿಗಿಂತ ಕಡಿಮೆ ಇರಲಿಲ್ಲ, Ratan Thiyam ನಾ
ಚಕ್ರವ್ಯೂಹ ನೆನಪಾಯಿತು. ಒಂದೇ ಪರದೆಯನ್ನು ಇಡೀ
ನಾಟಕದಲ್ಲಿ ಬರೇ ಬೆಳಕಿನಿಂದ ಪ್ರತಿ
ಅಂಕ ದಲ್ಲೂ ಬೇರೆಯಾಗಿ
ಕಾಣಿಸಿದ್ದು ನಿರ್ದೇಶನದ ವೈಶಿಷ್ಟ್ಯ. ಪರದೆ,
ಪರಿಕರ ಪ್ರತಿ ಅಂಕದಲ್ಲೂ ಬದಲಾಗಬೇಕಾದರೆ
೧೦ ಘಂಟೆ ಅವಧಿ
ಇನ್ನೂ ಹೆಚ್ಚಾಗಿತ್ತು ಅಲ್ಲವೇ. ಸಂಗೀತ ಎಷ್ಟು
ಬೇಕೋ, ಎಷ್ಟೆಷ್ಟು ಬೇಕಾಗಿತ್ತೋ ಪ್ರದೇಶಕ್ಕೆ
ತಕ್ಕ ಭಾಷೆಯನ್ನು ಬಳಸಿ ಅಳವಡಿಸಿ,
ನಾಟಕದ ಓಘಕ್ಕೆ ತೊಂದರೆ ಆಗದಂತೆ
...ಆದರೆ ಆಕರ್ಷಿಸುವಂತೆ ಪೋಣಿಸಿದ್ದಾರೆ.
ನಮಗೆ ಹವ್ಯಾಸಿ, ವೃತ್ತಿ ರಂಗಭೂಮಿ
ಬಗ್ಗೆ ಅಲ್ಲಿ, ಇಲ್ಲಿ ಓದಿ
ತಿಳಿದವರು, ಅದರ ಸರಿಯಾದ ವ್ಯಾಖ್ಯಾನ
ಗೊತ್ತಿಲ್ಲ Artists make
living out of theatre, ಅನ್ನೋದು
ಬಿಟ್ಟರೆ ಬೇರೆ ಯಾವುದೂ ಕೊರತೆ
ಇರದಂತೆ ನಟರನ್ನು ಹುಡುಕಿ ತೆಗೆದಿದ್ದಾರೆ.
ಕೃಷ್ಣ, ಭೀಮ, ಅಲಾಯುದ ನಟನೆ ಅಷ್ಟೇ ಅಲ್ಲ
ಆಕಾರದಲ್ಲೂ ಪಾತ್ರವನ್ನು ಪ್ರತಿಬಿಂಬಿಸುತ್ತಿದರು, ಇದು ಬಹುಶಃ ಹವ್ಯಾಸಿ
ರಂಗಭೂಮಿಯಲ್ಲಿ ಸಾಧ್ಯ
ಮಾಡಲು ಪ್ರಕಾಶರ ಚರಿಷ್ಮಗೆ , ವೃತ್ತಿ
ಶ್ರದ್ಧೆಗೆ ಮಾತ್ರ ಸಾಧ್ಯ.
ಇಷ್ಟು ಜನ ಅದ್ಬುತ
ನಟರನ್ನು ಒಟ್ಟುಗೂಡಿಸಲು, ಪ್ರೋತ್ಸಾಹಿಸಲು, rehersal ಮಾಡಲು, ಬರೀ ಪ್ರತಿಭೆ
ಸಾಲುವುದಿಲ್ಲ, ಅಧಮ್ಯ ಉತ್ಸಾಹ, ಶ್ರದ್ಧೆ,
ಪರಿಶ್ರಮ ಎಲ್ಲಾ ಬೇಕು... millennials, gen Z ಗಳನ್ನ ಸಣ್ಣ
ಪಾತ್ರಗಳಲ್ಲಿ ಸೇರಿಸಿ ಪ್ರೇರೇಪಿಸುವುದು ಒಬ್ಬನಿಂದ
ಸಾಧ್ಯವೇ ಅಂತ ಹೊರಗಿನಿಂದ ಒಬ್ಬ
ಪ್ರೇಕ್ಷಕನಾಗಿ, ಕಲೆಯ ಆಸಕ್ತನಾಗಿ ನನಗೆ
ಈ ಯಶಸ್ವಿ ಪ್ರದರ್ಶನ
ಅದ್ಬುತದಂತೆ ತೋರುತ್ತಿದೆ.
ಸ್ವಯಂವರ ನಾಟಕ ಇನ್ನೊಮ್ಮೆ ನೋಡುವಾಸೆ,
ಪ್ರಕಾಶ ಮನಸು ಮಾಡಲಿ
*ಕುಂತಿ*
ಹೇಗೆ ಈ ಪಾತ್ರ
ನಿಭಾಯಿಸಿದರು, ಅಂತ ತುಂಬಾ ಬೆರಗಾದೆ.
ಚೌಡಯ್ಯದಲ್ಲಿ ಅಥವಾ khoday's ನಲ್ಲಿ ಏನೂ ವ್ಯತ್ಯಾಸ
ಕಾಣಿಸಲಿಲ್ಲ.
ಕಣ್ಣಂಚಿನ ಕಣ್ಣೀರು glycerine ಇಲ್ಲದೆ
ತರುವಷ್ಟು ಪಾತ್ರದಲಿ involve ಆಗಬಹುದೇ
ಅನ್ನುವುದೇ ಅಚ್ಚರಿ.
ಈ ಬಾರಿ ಖುದ್ದಾಗಿ ಅಭಿನಂದಿಸಲು
ದೊರಕಿದರು .
೧೦ ತಾಸಿನ ನಾಟಕ ಹೆಂಗ
ಕುಂತಿ?
ಪ್ರಶ್ನೀಗ
ಉತ್ತರ ಈ ಕುಂತಿ
Center pole of a tent, ಒಂತರಾ
anchoring role, ಇದನ್ನ ಇಷ್ಟು effortless ಆಗಿ ಮಾಡೋಕ್ಕೆ ಆಗುತ್ತದೆಯೇ? ಬರೇ
ಮಾತಲ್ಲ, ಬರೇ ಅಳು ಅಲ್ಲ,
ಬರೇ ಅಲ್ಲ ನಗು
ಅಲ್ಲ. Almost, ಎಲ್ಲಾ ಪಾತ್ರದ ಜೊತೆ
ಅಭಿನಯಿಸಿದ ನಟನೆ. ಅಂಕದ,
ಯಾವುದೋ ಮೊಲೆಯಲ್ಲಿ ನಿಂತಾಗ ಕೂಡ
ಮರೆಯದ ಅನುಭವ ನೀಡಿದ ನಟನೆ.
ಕನ್ನಡದ ಇಂತ ನಟಿಯರು ಇಷ್ಟು
ವರ್ಷಗಳಾದರೂ ಹೆಸರಿರದೆ ಉಳಿದಿರುವುದು ನಮ್ಮ
ಚಿತ್ರ ರಂಗದ ದುರಂತ.
ನಮಗೆ
effortless acting ನೋಡಲು ಸಿಕ್ಕಿದೆ ಭಾಗ್ಯ
*ಕೃಷ್ಣ*
ಆ ನಗುಮುಖ ಮರೆಯಲು ಆಗುವುದಿಲ್ಲ,
ಪ್ರತಿ ಪ್ರಯೋಗದಲ್ಲಿಯೂ tonality maintain ಹೇಗೆ ಮಾಡುತ್ತಾರೆ ಅನ್ನುವ
ಪ್ರಶ್ನೆಗೆ ಉತ್ತರವಾಗಿ ನಿಲ್ಲುತ್ತಾರೆ.
ರಂಗದ ಮೇಲೆ ರಂಗನಾಥನನ್ನು ಅವನದೇ
auraವನ್ನು ಸಿನಿಮಾದಂತೆ graphics ಇರದೆ bgm ಇರದೆ ತಂದ
ಕೀರ್ತಿ ಬೆಳವಾಡಿ ಅವರಷ್ಟೇ ಈ
ನಟನಿಗೂ ಸಲ್ಲಬೇಕು. ಮುಂದೆ ನಿಂತು
ಹೇಳಿದ ಮಾತುಗಳ ದನಿ, ಹಿಂದೆ
ನಿಂತು ಆಡಿದ ದನಿಗಳಷ್ಟೇ ಸರಳವಾಗಿತ್ತು.
ಆ ನಗು ಎಷ್ಟು
ಸಹಜ ಅಂದರೆ, ಯಾವ
ಭಾಗವೂ ನಟನೆ ಅನಿಸಲೇ ಇಲ್ಲ.
ಬಂದು ಹೋಗುವ, ಏಕಾಂಕ ಭಾಗವೀರದ
ಒಂದು ದೊಡ್ಡ ಪಾತ್ರ, ಅದನ್ನು
ನಿಭಾಯಿಸುವ ಶಕ್ತಿ ದೊಡ್ಡದೇ ಇರಬೇಕು.
ಉಪದೇಶ gyan session ತರ
ಆಗದೆ ಇರುವಷ್ಟು ಸಹಜ delivery
ಮುಂದೆ ಹೇಗೋ ಒಂದು ದೃಶ್ಯ
ಏಕಾಂಕ ವಾಗಿ ನಟನಿಗೆ ದೊರೆಯಬೇಕು
ಎಂದು ಬಯಸುತ್ತೇನೆ
*ಕರ್ಣ*
ಜೊತೆಗೆ ಬಂದ ಮಿತ್ರನಿಗೆ ಹೇಳಿದೆ,
ನಾನು ಎರಡನೇ ಬಾರಿ ನೋಡೋಕ್ಕೆ
ಈ ಪಾತ್ರವೇ ಕಾರಣ.
*ಇಷ್ಟು ಪ್ರೀತಿ ಇರುವ
ನಮ್ಮಮ್ಮ ಗೊಡ್ಡು ಹೇಗೆ ಆದಾಳು*
ಅನ್ನೋ ಡೈಲಾಗ್ ಅವರ ಬೇಸ್
voice ನಲ್ಲಿ ಇನ್ನೂ ಕೇಳಿಸುತ್ತಿದೆ. *ನಿನ್ನ
ಕೊನೆ ಬಾರಿ ನೋಡುತ್ತೇನೆ, ಅದಕ್ಕೆ
ನಮಸ್ಕರಿಸುತ್ತೇನೆ* ಎಂದು ತಿರುಗಿ ಬರುವ
ಸನ್ನಿವೇಶ, ಒಂದು ಹೇಳದ ಭಾವಾವೇಶಕ್ಕೆ
ಕರೆದೊಯ್ಯುತ್ತದೆ...ಈ ದೃಶ್ಯ
ನನಗೆ ಎರಡನೇ ಬಾರಿ ನೋಡುವಂತೆ
ಮಾಡಿತು.
ಅಭಿನಯ, ಹಾಗೆ ಅನಿಸದೇ ಇದ್ದಲ್ಲಿ
ಅದೇ ನಿಜವಾದ ನಟನ
ಗುರುತು. ನನಗೆ ಕರ್ಣ ಎಂದರೇ
ಹೀಗೆ ಇದ್ದಿರಬೇಕು, ಅವನ body language, voice ಹೀಗೆ ಇದ್ದೀತು ಅನಿಸುತ್ತಿದೆ
ಎಂದರೆ, ಬೇರೆಯವರನ್ನು ಕಲ್ಪಿಸುವುದಕ್ಕೂ ಆಗುತ್ತಿಲ್ಲ.
ಒಬ್ಬನ ಒಳ ದನಿ
ಕಿರುಚಿದಯೆ ಇನ್ನೊಬ್ಬರಿಗೆ ಹೇಗೆ ತಲುಪಿಸಬಹು ಎನ್ನುವುದಕ್ಕೆ
ಉದಾಹರಣೆ ಆಗಿ ಈ ನಟನೆ
ನಿಲ್ಲುತ್ತದೆ, ಎಲ್ಲೋ overacting ಮಾಡಬಹುದೇನೋ ಅಂದಾಗ ಕಣ್ಣೀರು ಜಿನುಗುವಂತೆ
ಮಾಡಿದ ಅಭಿನಯ.
*ಗಾಂಧಾರಿ*
ಮೊದಲ ಅಂಕದಲ್ಲೆ ದೊಡ್ಡ ಸಂಭಾಷಣೆ
ಇರುವ ನಾಜೂಕಾದ ಪಾತ್ರ. ಆ
ಅಧ್ಬುತ ನಟನೆ, ಡೈಲಾಗ್ delivery ಚಪ್ಪಾಳೆ
ಗಿಟ್ಟಿಸುವುದಿಲ್ಲ, ಕಾರಣ ಪ್ರೇಕ್ಷಕರು ಮೊದಲನೇ
ಅಂಕಕ್ಕೆ ಇನ್ನೂ involve ಆಗಿರುವುದಿಲ್ಲ, ಎರಡನೆಯದು, ಅದು ತುಂಬಾ
ಸಹಜವಾಗಿ ಕಾಣಿಸುತ್ತೆ.
ಚೌಡಯ್ಯದಲ್ಲಿ
ನಡೆದ ಪ್ರಯೋಕಕ್ಕಿಂತ ತುಂಬಾ ಚೆನ್ನಾದ ಅಭಿನಯ
ಖೋಡೆ ರಂಗಮಂದಿರದಲ್ಲಿ ದೊರೆಯಿತು.
ಕಣ್ಣಿಗೆ ಪಟ್ಟಿ ಕಟ್ಟಿ, ಮೆಟ್ಟಿಲು
ಏರಿಳಿಯುವುದು,ಅದೂ ಅಭಿನಯಿಸುತ್ತಾ...ಸಾಧ್ಯವೇ
ಇಲ್ಲ ಅನಿಸುತ್ತದೆ.
*ದುರ್ಯೋಧನ*
ಪುನೀತ್ ಇಸಾರ್ ದುರ್ಯೋಧನ ಪಾತ್ರದಲ್ಲಿ
ಬಹಳ ಬಾರಿ ನೋಡಿ,
ನೋಡಿ ಬೇರೆಯವರನ್ನು ಕಲ್ಪಿಸಿಕೊಳ್ಳಲು ಆಗುತ್ತದೆಯೇ ಅನಿಸಿದಾಗ...ಅಬ್ಬಾ ಈ ದುರ್ಯೋಧನ,
ಬರೀ ಕಣ್ಣಿನ ವಾರೆ
ನೋಟದ ಜೊತೆ ತಿವಿಯುವ ಸಂಭಾಷಣೆ,
ಜೊತೆಗೆ ವಿಡಂಬನೆ ಆಂಗಿಕ ಅಭಿನಯ
ಪಾತ್ರದ ಕಲ್ಪನೆಯನ್ನು ಬೇರೆ ಸ್ತರಕ್ಕೆ ಏರಿಸಿದ್ದಾರೆ.
ಯಾರನ್ನೂ ಇಮಿಟೇಟ್ ಮಾಡದೇ ಈ
ತರ tonality , is just
amazing.
ಕೆಟ್ಟ ಪಾತ್ರಗಳನ್ನು ಅಬ್ಬರಿಸಿ ನಟಿಸುವ ನಟನೆ
ತುಂಬಾ ಸಲ ಚೆನ್ನಾಗಿ
ಅನಿಸಿದರೂ ಪಾತ್ರ ಎಲ್ಲೋ ಕಳೆದು
ಹೋಗಿ ಬಿಡುತ್ತದೆ. ಕಣ್ಣಲ್ಲಿ ಅಭಿನಯಿಸಬಹುದು ಅನ್ನೋ
ಅನಂತನಾಗ್ , ವಜ್ರಮುನಿ ಜೊತೆ ಇವರನ್ನೂ
ಸೇರಿಸಬಹುದು...ಒಂದೂ ಡೈಲಾಗ್ ತಡವರಿಸದೆ
ಅನೂಚಾನಾಗಿ ಸರಿಯಾದ ಏರಿಳಿತದ ಆ
ದನಿ ಇನ್ನೂ ಗುನುಗುನಿಸುತ್ತಿದೆ,
ಭೀಷ್ಮನನ್ನು ಬೈದ, ದ್ರೋಣನನ್ನು ದೂರಿದ,
ಭೀಮನನ್ನು ದೂಡಿದ, ಧರ್ಮಾನನ್ನು ತಮಾಷೆ
ಮಾಡಿದ ರೀತಿ ತುಂಬಾ unique ಆಗಿತ್ತು.
ಮತ್ತೆ ಕೇಳಬೇಕೆನಿಸುವ ದನಿ, ನೋಡಬೇಕೆನ್ನಿಸುವ ನಟನೆ.
Constrained acting possibilities is extended to villian in
mythological play..
*ದ್ರೋಣ*
ಕ್ಲಿಷ್ಟವಾದ
ಪಾತ್ರವನ್ನು ಎಷ್ಟು ಲೀಲಾಜಾಲವಾಗಿ ಅಭಿನಯಿಸಿದಿರು. ಉದ್ದುದ್ಧದ
ಸಂಭಾಷಣೆ , ಪ್ರತಿ ದೃಶ್ಯದಲ್ಲಿ ಬೇರೆ
shade ಇರುವ ಪಾತ್ರ, ಅವರ ಅಭಿನಯದ
ಅನುಭವ ಇದರಲ್ಲಿ ಪಾಕ ಇಳಿಸಿದ
ಹಾಗಿತ್ತು. ಸಾಮಾಜಿಕ ನಾಟಕಗಳಲ್ಲಿ ಅವರ
ಅಭಿನಯ ನೋಡಿದ್ದೆ, ಪೌರಾಣಿಕ ಪಾತ್ರದಲ್ಲಿ
ಮೊದಲ ಬಾರಿ (ಸಂಕ್ರಾತಿಯ ಬಸವಣ್ಣ,
ಐತಿಹಾಸಿಕ ಪಾತ್ರ ಎಂದು
ಪರಿಗಣಿಸಿ) ...ಅರಿಷಡ್ವರ್ಗದ ಅಭಿನಯದ ಸಾಲಿಗೆ ಇದು
ನಿಲ್ಲುತ್ತದೆ. ಚೌಡಯ್ಯದಲ್ಲಿ ನಡೆದ ಪ್ರಯೋಗಕ್ಕಿಂತ ಪಾತ್ರ
ಪೋಷಣೆ ಅದ್ಭುತವಾಗಿತ್ತು. ದುರ್ಯೋಧನನಿ ಗೆ ಪಂಜು
ಹಚ್ಚಿದ್ದಕ್ಕೆ ಬಯ್ಯುವ ಸನ್ನಿವೇಶ, ಕರ್ಣನಿಗೆ ಎದುರಾಗುವ ಸನ್ನಿವೇಶ,
ಅಶ್ವತ್ಥಮನಿಗೆ ಸುಮ್ಮನಾಗಿಸುವ ಸನ್ನಿವೇಶ ಬಹಳ ಹತ್ತಿರವೆನಿಸಿತು.
*ಭೀಮ*
ಮುಗ್ಧತೆ,
ವೀರತನ ಮತ್ತು ಪ್ರೀತಿ ಒಟ್ಟಾದಾಗ
ಬರುವ ಪಾತ್ರ ಈ ಭೀಮ.
ಅದನ್ನು ಒಂದಕ್ಕೊಂಡು
ಹೊಂದಾಣಿಸಿ ಸ್ಕ್ರಿಪ್ಟ್ ಬರೆದ ಪ್ರಕಾಶ್ ಬೆಳವಾಡಿಯವರಷ್ಟೇ
ಈ ಪಾತ್ರಧಾರಿ ಜೀವ
ತುಂಬಿದರು. ದ್ರೌಪದಿಯ
ಜೊತೆ ಅಳುವಾಗ, ಸಾಲಕಟಂಕಟಿ ನಗುವಾಗ,
ದುರ್ಯೋಧನ ಧರ್ಮಜ ನಿಗೆ ಬಯ್ಯುವಾಗ,
ದ್ರುಪದನಿಗೆ ಅಭಿನಂದಿಸುವಾಗ ಬರುವ ಆ ಸಂಭಾಷಣೆಗಳು
ತುಂಬಾ ಸಹಜ / ಆಪ್ತ ಎನಿಸಿದವು.
.
*ವ್ಯಾಸ*
ದೇವತಾ ಪುರುಷನಾಗಿ ಬಿಂಬಿತವಾಗಿರುವವರ ಮಾನವನಾಗಿ
ಇರುವ ತುಮುಲಗಳನ್ನು ತೀರ ಸ್ಪಷ್ಟವಾಗಿ ತೋರಿಸುವ,
ಜೊತೆಗೆ ಪ್ರಕಾಶ ಅವರ ಸಾಕಷ್ಟು
sarcasm ಇರೋ ಪಾತ್ರ, ಸೇತುರಾಂ ಅವರು
ಅದಕ್ಕೆ ಹೆಚ್ಚು sarcasm ಬೆರೆಸದೆ ಅಭಿನಯಿಸಿದ್ದು aa ಪಾತ್ರದ
ಗಂಭೀರತೆಗೆ ತೊಡರಾಗಲಿಲ್ಲ. ಗತಿ, ತಳಿ, ಅತೀತ
ದಲ್ಲಿ ನೋಡಿದ ಸೇತುರಾಂ ಇಲ್ಲಿ
ಬೇರೆ ರೀತಿಯೇ ಕಾಣಿಸುತ್ತಾರೆ. ಭೀಷ್ಮರ
ಜೊತೆಗಿನ ಸಂವಾದ ತುಂಬಾ ಚೆನ್ನಾಗಿ
ಮೂಡಿಬಂತು.
*ದೃತರಾಷ್ಟ*
ನಮದಲ್ಲದ ತಪ್ಪಿನಿಂದ (ಕುರುಡನಾಗಿ ಹುಟ್ಟಿದ)ದೊರೆಯಬೇಕಾದ
(ಪಟ್ಟದ ರಾಜನಾಗಬೇಕಾದ) ಕೆಲವು
ಸವಲತ್ತುಗಳು ಸಿಗದಿದ್ದಾಗ ಆಗುವ ವಿಷಾದ ಮಗನಿಗೂ
ಸಿಗದಿದ್ದಾಗ ಸಿಟ್ಟಾಗಿ ಪರಿವರ್ತನೆ ಆಗುತ್ತದೆ.
ಕುರುಡ ಸಹಜ limitation ನಲ್ಲಿ ಒಂದು ಅಸಹಾಯಕತೆ
ಇದೆ. ಇದನ್ನೆಲ್ಲಾ ಸುಮಾರು ೨ ಘಂಟೆಗಿಂತಲೂ
ಹೆಚ್ಚಾಗಿ ರಂಗದ ಮೇಲೆ ಬರುವ
ಪಾತ್ರದಲ್ಲಿ, ಈ ಪಾತ್ರಧಾರಿ
ನಮ್ಮನ್ನ ಅವರೊಂದಿಗೆ ಸೇರಿಸಿಬಿಡುತ್ತಾರೆ, ಯಾರಿಗೂ
ಅದು ಪಾತ್ರವೆನಿಸದೆ ನಮ್ಮ
ಒಡನೆ ನಾಟಕ ನೋಡುವ ಒಬ್ಬ
ಪ್ರೇಕ್ಷಕನಾಗಿ ಕಾಣಿಸಿಬಿಡುತ್ತಾರೆ. ಪಾಂಡುವಿನ ಅಸಹಾಯಕತೆ, ದುರ್ಯೋಧನನ
ಅಸಹಾಯಕತೆ ಬೇರೆ ಬೇರೆಯಾಗಿ ಅಭಿನಯಿಸಿದ್ದಾರೆ
(ಒಂದೆರಡು ಕಡೆ ಬಿಟ್ಟು), ಇಷ್ಟು
ದೊಡ್ಡ ನಾಟಕದಲ್ಲಿ, ನಾವು ಸಂಭಾಷಣೆ ಕೇಳಿಸಿಕೊಳ್ಳುವುದೇ
ಕಷ್ಟವಿರುವ ಎರಡು ತುಂಬ ಮುಖ್ಯ
ಪಾತ್ರಗಳನ್ನು ಚೆನ್ನಾಗಿ ಪ್ರತಿಬಿಂಬಿಸಿದ್ದಾರೆ.
*ಯುವ ಕುಂತಿ ಮತ್ತು ಇತರ
ಪಾತ್ರಗಳು*
ಪ್ರಕಾಶ ನಿರ್ದೇಶನದಲ್ಲಿ flashback ನಿರೂಪಣೆ ಕುಂತಿ
- ಪಾಂಡುವಿನ ಸನ್ನಿವೇಶ ಅದ್ಭುತ ಅನ್ನಿಸುವಷ್ಟು
ಮಟ್ಟಿಗಿದೆ. ಅದನ್ನ ಕಾರ್ಯರೂಪಕ್ಕೆ ತರಲು
ಸಣ್ಣ ಕುಂತಿ ತುಂಬಾ ಸಹಕರಿಸಿದ್ದಾರೆ.
ವಾರೆ ನೋಟ, ನಿರಾಸೆಯ ಭಾವ,
ದೇವ ಗಣಗಳ ಆಸೆಯ
ಕಣ್ಣಿಗೆ ನಾಚುವ ಹೆಣ್ಣಾಗಿ ತುಂಬಾ
ಪರಿಣಾಮಕಾರಿಯಾಗಿ ಅಭಿನಯಿಸಿದ್ದಾರೆ. *ನನ್ನ ಹೆಸರು ದಾಸಿ*
ಎನ್ನುವ ವಿದುರನ ತಾಯಿಯ, ವ್ಯಾಸರ
ಜೊತೆಗಿನ ಸನ್ನಿವೇಶ ಇನ್ನೂ ಕಣ್ಣಿಗೆ
ಕಟ್ಟಿದಂತಿದೆ. ಗಂಟು ಮೂಟೆಯ teenage love ನಲ್ಲಿ
ಇರುವ ತುಂಟ ನಗೆ, ಇಲ್ಲಿ
ಮಾಗಿದ ನಗುವಾಗಿ ಬೇರೆಯಾಗಿ ಕಾಣಿಸುತ್ತದೆ.
*ಮಾದ್ರಿ ಮತ್ತು ಇತರ ಪಾತ್ರಗಳು*
ಅಕ್ಕನ ಜೊತೆ ಕಷ್ಟ ಹಂಚಿಕೊಳ್ಳುವ
ತಂಗಿಯಾಗಿ ಮೊದಲು ದೃಶ್ಯದಲ್ಲಿ ಕಾಣುವ
ಪಾತ್ರ, ಕಾಮದ ಬೇಗೆಯಲ್ಲಿ ಬೆಂದ
ತರುಣಿಯಾಗಿ ವಿಭಿನ್ನ ರೂಪ ಪಡೆದುಕೊಳ್ಳುತ್ತದೆ,
ಅದನ್ನ ಮುಜುಗರ ಇಲ್ಲದೆ ರಂಗದ
ಗಾಂಭೀರ್ಯಕ್ಕೆ ತೊಂದರೆ ಇಲ್ಲದಂತೆ ನಟಿಸಿ
ತುಂಬಾ ನಾಜೂಕಿನ ನಡಿಗೆ ನಡೆಸಿದ್ದಾರೆ.
ಮುದುಕ ಧೃತರಾಷ್ಟನ ದಾಸಿಯಾಗಿ , ಕೈ ಕೊಸರಿಕೊಳ್ಳುವ
ಸನ್ನಿವೇಶ ಸರಳ ಅನಿಸಿವ ಹಾಗೆ
ಅಭಿನಯಿದ್ದಾರೆ.
ಚೌಡಯ್ಯದಲ್ಲಿ
ಅರವತ್ತು 65 ಆಯ್ತು, ಈ ಸಲ
ಆಗಲಿಲ್ಲ.
*ವಿಧುರ*
B R Chopra Mahabharata ದ
ವಿದುರನನ್ನೇ ಹೋಲುವ ಮೈಕಟ್ಟಿನ ಈ
ನಟ, ಮೈಕಟ್ಟಿಗೆ ಮೀರಿದ
ಧ್ವನಿಯಿಂದ ನಮ್ಮನ್ನೆಲ್ಲ ಸೆಳೆದುಬಿಟ್ಟರು. *ಮತ್ಸರವಂತೆ ಮತ್ಸರ* ಅನ್ನುವ
ಆ ಸಂಭಾಷಣೆ, ಎಂತಹ
ಸಂಯಮಿವುಳ್ಳ ಮಾನವ ಕೂಡ ತಾನು
ಶ್ರೇಷ್ಠ ಅಲ್ಲ ಅನ್ನೋ ಭಾವನೆಯಿಂದ
ಹೊರಗೆ ಬರಲು ಆಗೋದಿಲ್ಲ ಅನ್ನೋದನ್ನ
ತೋರಿಸಿತು. ಈಡಿ
ನಾಟಕದಲ್ಲಿ ಧೃತರಾಷ್ಟ್ರನ ಜೊತೆ ಸುಮಾರು ಎರಡು
ಘಂಟೆ, ಮತ್ತೆ ಕುಂತಿ ಜೊತೆ ೪೫
ಇರೋ ಪಾತ್ರ, ಸಂಭಾಷಣೆಗಳು
ತಡವರಿಸದೆ ಪಾತ್ರದ ಘಾಂಬಿರ್ಯಕ್ಕೆ ತೊಂದರೆ
ಇಲ್ಲದಂತೆ ಹಾಸ್ಯ ಹೊರಡಿಸುವಲ್ಲಿ ಗೆದ್ದಿದ್ದಾರೆ..
*ದ್ರೌಪದಿ*
ದ್ರೌಪದಿ ಈಗ ಬದುಕಿದ್ದರೆ
ಪಾತ್ರ ನೋಡಿ ಪಾತ್ರದಾರಿಗೆ
ಬಂದು ಮುಟ್ಟಿಡುತ್ತಿದ್ದಳೋ ಏನೋ
Flawless execution of ಸಂಭಾಷಣೆ,
ಪ್ರೀತಿ ,
ಆಪ್ತತೆ, ನೋವುಗಳ
ಪೋಷಣೆ
ಜಾಸ್ತಿ ಹೇಳಬಾರದು, ಬರೀ ನೋಡಿ
ಅನುಭವಿಸಬಹುದಾದ ನಟನೆ.
ಚೌಡಯ್ಯ ಭವನದಲ್ಲಿ ಕೊನೆ ದೃಶ್ಯ
ಖೋಡೆ ರಂಗಮಂದಿರಕ್ಕಿಂತ ಚೆನ್ನಾಗಿ ಮೂಡಿಬಂದಿತ್ತು. ವೈರಿ
Enemy ಆದದ್ದು ಅಷ್ಟು ತೊಂದರೆಯೇನೂ ಅನಿಸಲಿಲ್ಲ.
ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದಲ್ಲಿ
ಇವರ ಅಭಿನಯ ನೋಡಿ
ಈ subtle acting ಬಹುಶಃ ಮಲಯಾಳಿ ನಟಿ
ಅಂತ ಭಾವಿಸಿದ್ದೆ, ಕನ್ನಡತಿ
ಅಂತ ತಿಳಿದಾಗ ಸಂತೋಷವಾಯಿತು.
ಶೋಧ webseries ಇಷ್ಟವಾಗದಿದ್ದರೂ ಇವರ ಅಭಿನಯ ಇಷ್ಟವಾಯಿತು.
ತುಂಬಾ ಪಾತ್ರಗಳು ಬರೆಯುದ ಬಿಟ್ಟು
ಹೋಗಿವೆ, ಆದರೂ ಮನಸ್ಸಿನಲ್ಲಿ ಉಳಿದಿವೆ
ಕೃಷ್ಣಾನಂದ ಎಂ ಎಸ್
ಬೆಂಗಳೂರು