Tuesday, March 17, 2026

ಅಮಾವಾಸ್ಯೆಯಲೂ ಬೆಳದಿಂಗಳು

 ಚಂದಮನ ಬಿಂಬವನೆಳೆದು 
ಬೆಳಕ ಕದ್ದು ತಂದಿರುವೆ
ಬಿಂಬ
ಬೆಳಕಿನ ನೆರಳಾದರೂ, ಗೆಳತಿ...ಬೆಳಗು ಬೆಳಗೇ


ಹುಣ್ಣಿಮೆಗೆ ಗಾಳವನಿಳಿಸಿ 
ಬಿದಿಗೆಗೆ ಎದ್ದು ಬಂದಿರುವೆ 
ಚಂದ್ರ 
ಕಾಲು ಭಾಗವಾದರೇನು ಗೆಳತಿ... ಬೆಳಕು ಬೆಳಕೇ


ನೂರಾರ ಚೂರ ಬುಟ್ಟಿಯಲಿರಿಸಿ
ಬಟ್ಟೆಯ ಹೊಚ್ಚು ಮುಚ್ಚಿರುವೆ
ಸೆರಗನು
 ಸರಿಸಿದರೆ ಗೆಳತಿ...ಅಮಾವಾಸ್ಯೆಯಲೂ ಬೆಳದಿಂಗಳು