ದಾರಿ ತಪ್ಪಿದೆ
ಹಾದಿ ಕಳೆದಿದೆ
ಬಿದ್ದಿದ್ದೇನೆ ಬೀದಿಯಲ್ಲೇ
ಏನಾದರೂ ಸುಖಿಸುವ ಆತ್ಮ ನನ್ನದು : ದಯೆ ನಿನ್ನದು
ಬದುಕು ತುಳಿದರೂ
ಬಾಳು ಬೋರಲಾದರೂ
ನಾ ಅತ್ತಿಲ್ಲ ಕರೆದಿಲ್ಲ
ಆಡಿಸಿ ಬೀಳಿಸಿ ಉರಳಿಸಿದರೂ : ತಲೆ ಬಾಗಲಿಲ್ಲ
ಇಂದು ಬೇಗೆ , ಬಿದಿಗೆ
ನಾಳೆ ಕಣ್ಣಾವಿ,
ಕತ್ತಲ ಅಮವಾಸಿ
ದಿನಕರನ ಕರಗಿಸಿ ಕತ್ತಲಾಗಿಸಿದರೂ : ನಾ ಹೆದರದ ಅಧೀರ
ನಾಕ ಕದವ ತೆಗೆಯದೇ
ನರಕ ಮರಳಿ ಕಳಿಸದೇ
ಕರಕಲಾದರೂ
ನೀ ನೀಡಿದ ಆತ್ಮದ ನಾಯಕ ನಾ : ಬದುಕ ಚಾಲಕ ನಾ
ಹಾದಿ ಕಳೆದಿದೆ
ಬಿದ್ದಿದ್ದೇನೆ ಬೀದಿಯಲ್ಲೇ
ಏನಾದರೂ ಸುಖಿಸುವ ಆತ್ಮ ನನ್ನದು : ದಯೆ ನಿನ್ನದು
ಬದುಕು ತುಳಿದರೂ
ಬಾಳು ಬೋರಲಾದರೂ
ನಾ ಅತ್ತಿಲ್ಲ ಕರೆದಿಲ್ಲ
ಆಡಿಸಿ ಬೀಳಿಸಿ ಉರಳಿಸಿದರೂ : ತಲೆ ಬಾಗಲಿಲ್ಲ
ಇಂದು ಬೇಗೆ , ಬಿದಿಗೆ
ನಾಳೆ ಕಣ್ಣಾವಿ,
ಕತ್ತಲ ಅಮವಾಸಿ
ದಿನಕರನ ಕರಗಿಸಿ ಕತ್ತಲಾಗಿಸಿದರೂ : ನಾ ಹೆದರದ ಅಧೀರ
ನಾಕ ಕದವ ತೆಗೆಯದೇ
ನರಕ ಮರಳಿ ಕಳಿಸದೇ
ಕರಕಲಾದರೂ
ನೀ ನೀಡಿದ ಆತ್ಮದ ನಾಯಕ ನಾ : ಬದುಕ ಚಾಲಕ ನಾ