ಹರೇ ಕೃಷ್ಣ .. ಹರೇ ಕೃಷ್ಣ... ಕೃಷ್ಣ ಕೃಷ್ಣ ಎನ್ನಿರಿ
ಕೃಷ್ಣ ಸ್ಮರಣೆಯ ಹೊರತು ವ್ಯೆರ್ಥ ಕಾಲ ಕಳೆಯ ಬೇಡಿರಿ ||ಪ||
ದೇವಾ ನಂದು ಅಸೆ ಒಂದೇ
ಬೇರೆ ಅಸೆ ಬಿಡಿಸು ತಂದೇ ||
ಎನಗೆ ಸಾಕು ನಿನ್ನ ನಂಟು
ಬೇಡ ನನಗೆ ಬೇರೆ ಅಂಟು ||
ಹರೇ ಕೃಷ್ಣ .. ಹರೇ ಕೃಷ್ಣ... ಕೃಷ್ಣ ಕೃಷ್ಣ ಎನ್ನಿರಿ
ಕೃಷ್ಣ ಸ್ಮರಣೆಯ ಹೊರತು ವ್ಯೆರ್ಥ ಕಾಲ ಕಳೆಯ ಬೇಡಿರಿ ||ಪ||
ಕಂಠವು , ನಿನ್ನ ನಾಮವನ್ನೇ ಪಠಿಸಲಿ
ಕರವು ನಿನ್ನ ಸೇವೆಯನ್ನೇ ಮಾಡಲಿ ||
ಅಂಗ ಅಂಗವ್ವು ನಿನ್ನ ಸಂಗಡ
ರಂಗು ರಂಗಲಿ ನಲಿಯಲಿ ||
ಹರೇ ಕೃಷ್ಣ .. ಹರೇ ಕೃಷ್ಣ... ಕೃಷ್ಣ ಕೃಷ್ಣ ಎನ್ನಿರಿ
ಕೃಷ್ಣ ಸ್ಮರಣೆಯ ಹೊರತು ವ್ಯೆರ್ಥ ಕಾಲ ಕಳೆಯ ಬೇಡಿರಿ ||ಪ||
ನೀನು ಕೊಟ್ಟ ಗುಡಿಯೇ ಈ ಗುಡಿಸಲು
ತುತ್ತು ಅನ್ನಕೆ ಹೊಟ್ಟೆ ತುಂಬಿತು ನೀನು ಎನಗುಣಿಸಲು ||
ಇಷ್ಟವೆನಗೆಲ್ಲಾ ಕಷ್ಟ ನೀನೆ ಬರೆದಾ ವಿಧಿಯಲಿ
ಕಷ್ಟವೆನಗಿಲ್ಲ ಕೃಷ್ಣ ನೀನಿರೆ ನನ ಜೊತೆಯಲಿ ||