Friday, August 19, 2022

ಹರೇ ಕೃಷ್ಣ

ಹರೇ ಕೃಷ್ಣ .. ಹರೇ ಕೃಷ್ಣ...  ಕೃಷ್ಣ ಕೃಷ್ಣ ಎನ್ನಿರಿ 

ಕೃಷ್ಣ ಸ್ಮರಣೆಯ ಹೊರತು ವ್ಯೆರ್ಥ ಕಾಲ ಕಳೆಯ ಬೇಡಿರಿ ||ಪ||

ದೇವಾ ನಂದು ಅಸೆ ಒಂದೇ 

ಬೇರೆ ಅಸೆ ಬಿಡಿಸು ತಂದೇ ||

ಎನಗೆ ಸಾಕು ನಿನ್ನ ನಂಟು 

ಬೇಡ ನನಗೆ ಬೇರೆ ಅಂಟು ||

ಹರೇ ಕೃಷ್ಣ .. ಹರೇ ಕೃಷ್ಣ...  ಕೃಷ್ಣ ಕೃಷ್ಣ ಎನ್ನಿರಿ 

ಕೃಷ್ಣ ಸ್ಮರಣೆಯ ಹೊರತು ವ್ಯೆರ್ಥ ಕಾಲ ಕಳೆಯ ಬೇಡಿರಿ ||ಪ||

ಕಂಠವು , ನಿನ್ನ ನಾಮವನ್ನೇ ಪಠಿಸಲಿ 

ಕರವು ನಿನ್ನ ಸೇವೆಯನ್ನೇ  ಮಾಡಲಿ ||

ಅಂಗ ಅಂಗವ್ವು ನಿನ್ನ ಸಂಗಡ 

ರಂಗು ರಂಗಲಿ ನಲಿಯಲಿ ||

ಹರೇ ಕೃಷ್ಣ .. ಹರೇ ಕೃಷ್ಣ...  ಕೃಷ್ಣ ಕೃಷ್ಣ ಎನ್ನಿರಿ 

ಕೃಷ್ಣ ಸ್ಮರಣೆಯ ಹೊರತು ವ್ಯೆರ್ಥ ಕಾಲ ಕಳೆಯ ಬೇಡಿರಿ ||ಪ||

ನೀನು  ಕೊಟ್ಟ ಗುಡಿಯೇ ಈ ಗುಡಿಸಲು 

ತುತ್ತು ಅನ್ನಕೆ ಹೊಟ್ಟೆ ತುಂಬಿತು ನೀನು ಎನಗುಣಿಸಲು ||

ಇಷ್ಟವೆನಗೆಲ್ಲಾ ಕಷ್ಟ  ನೀನೆ ಬರೆದಾ  ವಿಧಿಯಲಿ 

ಕಷ್ಟವೆನಗಿಲ್ಲ ಕೃಷ್ಣ ನೀನಿರೆ  ನನ ಜೊತೆಯಲಿ ||

No comments: