Wednesday, June 05, 2013

ವೈಫೂ ಹೀಂಗೆನೆ ?!



ಹಾ ಗಜಿಬಿಜಿ ಗಡಿಬಿಡಿ ಹ ಹ್ಹ ಹ್ಹ ಹೋ
ಲೈಫು ಇಷ್ಟೇನೇ
ಕಿರಿಕಿರಿ ಕಯ್ಯ ಕಯ್ಯ ಕೊ ಕ್ಕೊ ಕ್ಕೊ
ವೈಫು ಹಿಂಗೇನೇ  

ಹಾ ಗಜಿ ಬಿಜಿ ತರ ತರತರಪೊ, ಹಿರಿಯರ ವಟ ವಟ , ಅಯ್ಯೊಯ್ಯೊಪ್ಪೋ
ಕಿರಿಯರ ಬದುಕಿದು ಮುಗಿತಪ್ಪೊ, ಮದುವೆಯನ್ತೋ ಮ್ಯಾರೇಜಂತೋ



ಜಾತ್ಕ ಗೀತ್ಕ ಎಲ್ಲ ನೋಡಿ
ಬಿಯೋಡಟ ಸ್ಕ್ಯಾನ್ ಮಾಡಿ 
ಹುಡುಕಿದ ಹುಡುಗಿ ನನ್ನ ಜೋಡಿ
ವೈಫೂ ಇವ್ಲೇನೆ!


ನಮ್ಮ ಹುಡ್ಗೀರ್ ಪಾಪದೊರು ಅವ್ರು ಹಿಂಗೆನೆ
ಗಂಟು ಹಾಕಿ ನಂಟು ಆದ್ಮೇಲ್ ಲೈಫು ಹಂಗೇನೆ !


ಮನೆಯನ್ನಲ್ಲಾ ಚೇಂಜ್ ಮಾಡಿ
ನಮ್ಮ ಹಾಬೀಸ್ನ್ ಹೊರಗೆ ದೂಡಿ
ಹೊರಗೆ ಹೋಗಬೇಕು ಕಾಡಿಬೇಡಿ
ವೈಫೂ ಹೀಂಗೆನೆ ?!



ನಾವು ಹಾಕೊಲ್ಲ್ಲೋ ಎಲ್ಲ ಅಂಗಿ
ಸೆಲೆಕ್ಟ್ ಮಾಡೋ ಲಲಿತ ಲತಾಂಗಿ
ಚೇಂಜ್ ಮಾಡ್ಬಿತ್ಳು ನಮ್ಮ ಭಂಗಿ
ವೈಫೂ ಹೀಂಗೆನೆ ?!

ನಮ್ಮ ಹುಡ್ಗೀರ್ ಪಾಪದೊರು ಅವ್ರು ಹಿಂಗೆನೆ
ಗಂಟು ಹಾಕಿ ನಂಟು ಆದ್ಮೇಲ್ ಲೈಫು ಹಂಗೇನೆ !

ಟಿವಿ ರೆಮೋಟೆ ನನ್ನದೆನ್ನಬೇಡ
ಕ್ರಿಕೆಟ್ ಫುಟ್ಬಾಲ್ ನೋಡಲೇ ಬೇಡ
ಉತರನ್ ,ಸಾಸ್ ಬಹು ಬೇದನ್ನಬೇಡ
ವೈಫೂ ಹೀಂಗೆನೆ ?!

ವೀಕೆಂಡ್ ಅವ್ರೆ ಪ್ಲಾನು ಮಾಡಿ
ಹೇಳಿದ್ಕಡೆಗೆ ಹೊಡಿಬೇಕು ಗಾಡಿ 
ಎಲ್ಲಾರ್ ಮೇಲೂ ಕೇಳಬೇಕು ಚಾಡಿ
ವೈಫೂ ಹೀಂಗೆನೆ ! 

ನಮ್ಮ ಹುಡ್ಗೀರ್ ಪಾಪದೊರು ಅವ್ರು ಹಿಂಗೆನೆ
ಗಂಟು ಹಾಕಿ ನಂಟು ಆದ್ಮೇಲ್ ಲೈಫು ಹಂಗೇನೆ !

ಮ್ಯಾಚಿಂಗ್ ಟಾಪ್ ಗೆ ಕಮರ್ಶಿಅಲ್ ಸ್ಟ್ರೀಟು
ಬ್ರಾಂಡೆಡ್ ಪ್ಯಾಂಟ್ಗೆ ಶಾಪರ್ ಸ್ಟಾಪ್ಪು
ದೀಪಾವಳಿ ಹಬ್ಬಕೆ  ಕಾಂತೀ ಸ್ವೀಟು
ವೈಫೂ ಹೀಂಗೆನೆ ! 

 ಮಾವ ಜಗತೀನಲ್ಲೇ ಒಳ್ಳೆ ಮ್ಯಾನು
ನನ್ನ ಕಾರೆ ಸಿಟಿ ಟ್ಯಾಕ್ಸಿ ವ್ಯಾನು
ಫ್ರೆಂಡ್ಸ್ ಜೊತೆ ಓಡಾಡೋಕ ನಮಗೆ  ಬ್ಯಾನು
ವೈಫೂ ಹೀಂಗೆನೆ ! 


ನಮ್ಮ ಹುಡ್ಗೀರ್ ಪಾಪದೊರು ಅವ್ರು ಹಿಂಗೆನೆ
ಗಂಟು ಹಾಕಿ ನಂಟು ಆದ್ಮೇಲ್ ವೈಫು ಹಂಗೇನೆ !

Tuesday, June 04, 2013

35 ರ ಕನವರಿಕೆಗಳು .



 35 ರ ಕನವರಿಕೆಗಳು ... ನನ್ನ ಮಿತ್ರನೊಬ್ಬ ಬರೆ ಪ್ರೇಮದ ಬಗ್ಗೆ ಕವನ ಏಕೆ ಅಂದಾಗ ಹುಟ್ಟಿದ ಕವನ . ಮಧ್ಯ ವಯಸ್ಸಿನ ೩೫ ರ ಆಸು ಪಾಸಿನವರಿಗೆ , ನಾವು ಮಾಡಬೇಕಿನ್ದದ್ದನ್ನು ಮಾಡಲಾಗಿಲ್ಲ .ಮಾಡಿದ್ದೂ ಖುಷಿ ಕೊಡ್ತಿಲ್ಲ ಅನ್ನೋ ಸ್ಥಿತಿಯಲ್ಲಿ ಇರ್ತಾರೆ .ಅಂತವರ ಕನವರಿಕೆಗಳು 

ಹಾಡದೆ ಉಳಿದ ಹಾಡು ಒಂದೀಟು ಹಾಂಗ ಉಳಿದಿತ್ತ
ಕಾಡುವ ಸಾಲಿನ ರಾಗದೊಳಗ  ಹೊಂದದ ಸಾಗಿತ್ತ
ಆದರ  ಅದನ್ನ ಹಾಡಬೇಕಿತ್ತ ...
ಅದನ್ನ ಹಾಡಲೆಬೇಕಿತ್ತ

ಮಾಡಿನ ಮ್ಯಾಲೆ ಹೊಚ್ಚಿದ ಹಂಚು  ತೂತ ಮುಚ್ಚಿತ್ತ
ಮ್ವಾಡದ ಒಳಗ ನೋಡಿ ಬಂದರ ಮಳೀನ ನಿಂತಿತ್ತ
ಹಾಕಿದ ಸಂಡಿಗಿ ಒಣಗಬೇಕಿತ್ತ
ಸಂಗಡ ಹೋಗಲೇಬೇಕಿತ್ತ

ನೋಡುವ ಕಣ್ಣಿಗೆ ಕಾಣದ ಕನಸು ಹೊಚ್ಚಿ ಮಲಗಿತ್ತ
ಬಾಡುವ ಕನಸಿಗೆ ಬಾಗಿದ ಮನಸು ರೊಚ್ಚಿಗೆ ಎದ್ದಿತ್ತ
ಅದರೂ ಬಾಳು  ನಡೆಸಬೇಕಿತ್ತ
ಗೋಳು   ನೋಡಲೆಬೇಕಿತ್ತ

ಬಾಡುವ ಹೂವಿಗ  ಹಸಿಯ  ಮಣ್ಣಿನ ಹುಚ್ಚು ಹಿಡಿದಿತ್ತ
ಬೆಳೆಯುವ ಭುವಿಗೂ   ಹಳದಿ    ಕಣ್ಣಿನ ರೋಗ ಬಂದಿತ್ತ
ಬ್ಯಾಡ ಅಂದರೂ ಬಂದಬಿಟ್ಟಿತ್ತ
ಬಂದು ಕುಂತಬಿಟ್ಟಿತ್ತ

ಮುಗಿಯದ ಹಾಡಿಗೆ ರಾಗದ ಅಭಾವ ತ್ರಾಸ ಕೊಟ್ಟಿತ್ತ
ಮರೆಯುತ ನಡೆದರೆ ರಾಗಕ ಭಾವ ತಾನ ತಂದಿತ್ತ
ಹಾಡಿನ ರಾಗ ಬಂದಿತ್ತ
ಅದರ ಹಾಡ ಮರೆತಿತ್ತ