Wednesday, September 28, 2022

ಹೊರಟಿದೆ ನೋಡಿ ರಾಮನ ಪಲ್ಲಕ್ಕಿ

 ಹೊರಟಿದೆ ನೋಡಿ ರಾಮನ ಪಾಲಕಿ 
ನಾನೆ ಪುಣ್ಯವಂತ ..... ಆನಂದ ಕಂದ 
ನೋಡುತ ನಿಂತೇ  ಅವನದೇ ಪಾಲಕಿ 
         ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ 
        ಹೊರಟಿದೆ ನೋಡಿ ರಾಮನ ಪಾಲಕಿ .  ನಾನೆ ಪುಣ್ಯವಂತ ..... ಆನಂದ ಕಂದ 
ಮುತ್ತು ನತ್ತು ಕೀರೀಟ ಪೀಠ  ಜರತಾರಿ 
ಕೇದಿಗೆ ಸಂಪಿಗೆ ಹಾರ  .... ಮಲ್ಲಿಗೆ ತುರಾಯಿ 
ತೇಲುತ ಬರುತಿದೆ ಚಂದನದ   ತಂಗಾಳಿ 
         ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ 
         ಹೊರಟಿದೆ ನೋಡಿ ರಾಮನ ಪಾಲಕಿ .  ನಾನೆ ಪುಣ್ಯವಂತ ..... ಆನಂದ ಕಂದ 
ಸಾವಿರ ಜನುಮದ ಪುಣ್ಯದ ಫಲವೋ 
ಪಾಲಕಿ ಹೊರುವ ಭಾಗ್ಯಕೆ ...ಸಂಚಿತದೇ  ಬಲವು 
ಮಾಯದ ಮೂರುತಿಗೆ ನನ್ನಯ ಒಲವೋ 
            ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ 
            ಹೊರಟಿದೆ ನೋಡಿ ರಾಮನ ಪಾಲಕಿ .  ನಾನೆ ಪುಣ್ಯವಂತ ..... ಆನಂದ ಕಂದ 
ಆತ್ಮದ ಅರಿವ ನೀಡಲವ ಉದಾರಿ 
ಅಶ್ವಥಪುರವೇ.... ರಾಮನ ರಹದಾರಿ 
ಪಾಲಕಿಯೇ ಹಾಡುತಿದೆ ಅದನೇ ಸಾರಿ ಸಾರಿ 
          ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ 
         ಹೊರಟಿದೆ ನೋಡಿ ರಾಮನ ಪಾಲಕಿ .  ನಾನೆ ಪುಣ್ಯವಂತ ..... ಆನಂದ ಕಂದ 

( Nighalo gheun dattachi palakhi ಎಂಬ ಮರಾಠಿ ಪದ್ಯದ ರಾಮಾನುವಾದ ) 


Saturday, September 17, 2022

ಬದುಕಿ ಬಂದ ಸಾವು


ಹುಟ್ಟಿನೊಂದಿಗೆ 

ಹುಟ್ಟುವುದು ಸಾವು 

 ಹುಟ್ಟು ಹಾಕುತ 

ಮುಂದೂಡುವೆವು ನಾವು 


ಗುಟ್ಟಿನೊಂದಿಗೆ 

ಗಟ್ಟಿಯಾಗುವುದು ಸಾವು 

ಗುಟುರು ಹಾಕುತ 

ದೂಕುವೆವು ನಾವು 


ಬಚ್ಚಿಟ್ಟುಕೊಂಡಷ್ಟು 

ಬಿಚ್ಚಿಕೊಳ್ಳುವುದು  ಸಾವು 

ಮುಚ್ಚಿ  ಹಾಕುತ 

ಮೆರೆದಾಡುವೆವು ನಾವು