ನನ್ನತನ ಚೀರಿ ಸಾಯುವಾಗ
ಯಾರೂ ಕೇಳಲಿಲ್ಲ
ನನಗೀಗ ಯಾರ ಕೂಗೂ
ಕೇಳುತ್ತಿಲ್ಲ
....ನಾನೀಗ ಕಿವುಡಬರಿಯದ ಲೇಖನಿಯ ಬರವಣಿಗೆಯ
ಯಾರೂ ಕಾಣಲಿಲ್ಲ
ನನಗೀಗ ಯಾವ ಕನಸೂ
ಕಾಣುತ್ತಿಲ್ಲ
....ನಾನೀಗ ಕುರುಡಅನುರಣ ನನ್ನವಗುಣಗಳ
ಮಾತನಾಡಲಿಲ್ಲವೇ ಜಗ
ನನಗೀಗ ಮೌನದೊಂದಿಗೂ
ಮತನಾಡಲಾಗುತಿಲ್ಲ
.....ನಾನೀಗ ಮೂಗಕೈ-ಕಾಲು, ಕಾರು-ಮನೆಗಳೆನ್ನ
ಬದುಕೆತಂದಿತು ಜಗ
ನನಗೀಗ ಮೂರು ಜನ್ಮವಿತ್ತರೂ
ಬದುಕಲಾರೆ
.....ನಾನೀಗ ಜೀವಚ್ಛವ
No comments:
Post a Comment